Tuesday, 6 June 2017

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ; 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ ಪ್ರಥಮ ಸ್ಥಾನದ ಗಳಿಕೆ ನೀರು ಕುಡಿದಷ್ಟು ಸಲೀಸು. 1913ರಲ್ಲಿ ಮೈಸೂರು ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು. 1930ರಲ್ಲಿ ಅವರಿಗೆ ಡೆಪ್ಯೂಟಿ ಕಮೀಷನರ್ ಹುದ್ದೆಗೆ ಭಡ್ತಿ ದೊರೆಯಿತು. ಸರಕಾರದ ಹಲವು ಉನ್ನತ ಹುದ್ದೆಗಳಲ್ಲಿ, ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದರು. 1943ರಲ್ಲಿ ಸರಕಾರದ ಸೇವೆಯಿಂದ, ಸ್ವಾಪೇಕ್ಷಿತ ನಿವೃತ್ತಿ ಪಡೆದರು. ಅವರ ಸರಕಾರೀ ಸೇವೆಯ ಅವಧಿ ಸಾಕಷ್ಟು ದೀರ್ಘವಾದುದು; ವೈವಿಧ್ಯಮಯವಾದುದು. ದೊರಕಿದ ಹುದ್ದೆಗೆ ಅಪಚಾರವಾಗದಂತೆ ದುಡಿದು ದಕ್ಷ ಆಡಳಿತಗಾರರೆಂಬ ಮನ್ನಣೆಗೆ ಪಾತ್ರರಾದರು. ಮಾಸ್ತಿಯವರ ರಾಜನಿಷ್ಠೆ ಹೆಸರುವಾಸಿಯಾದುದು. 1942ರಲ್ಲಿ ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದು ನೀಡಿ ಮಾಸ್ತಿಯವರನ್ನು ಗೌರವಿಸಿದರು. ಸರಕಾರಿ ನೌಕರಿಯ ಅನುಭವ ಅವರ ಸಾಹಿತ್ಯಕೃಷಿಗೆ ಬಹಳ ಸ್ಫೂರ್ತಿ ನೀಡಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಗೆ ಪ್ರಾರಂಭಿಸಿದರು. 1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಮೊದಲ ಸಣ್ಣ ಕಥೆಯನ್ನು ಬರೆದರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು ‘ಮಾಸ್ತಿ’ ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ. 1920ರಲ್ಲಿ ‘ಕೆಲವು ಸಣ್ಣಕಥೆಗಳು’ ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು. ಇದು ಮಾಸ್ತಿಯವರ ಮೊದಲ ಪುಸ್ತಕವಷ್ಟೇ ಅಲ್ಲ, ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟವಾದ ಮೊದಲ ಪುಸ್ತಕವೂ ಹೌದು. ಮಾಸ್ತಿಯವರ ಸುಮಾರು 90 ಕಥೆಗಳು ಹಿಂದೆ 14 ಸಂಪುಟಗಳಲ್ಲಿ ಪ್ರಕಟಗೊಂಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಇವು 5 ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಅವರು ಕನ್ನಡದ ಮೊದಲ ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ ಮಾಸ್ತಿಯವರಿಗೂ ಅವಿನಾ ಸಂಬಂಧ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ. ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ. ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ ಕಥೆಗಳಾಗಿವೆ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ. ಜೀವನದ ಅನುಭವ ನಿಚ್ಚಳ. ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ. ಸಂಗೀತಗಾರನೊಬ್ಬನ ಜೀವನವನ್ನು ಆಧರಿಸಿರುವ ‘ಸುಬ್ಬಣ್ಣ’ ಎಂಬ ನೀಳ್ಗತೆ ಪ್ರಪಂಚದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥದು. ಇದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೂ ಅನುವಾದವಾಗಿವೆ. ಕುರುಡರಿಗಾಗಿ ಬ್ರೈಲ್ ಆವೃತ್ತಿಯೂ ಬಿಡುಗಡೆಯಾಗಿದೆ; ಹಲವು ಪುನರ್ ಮುದ್ರಣಕಂಡಿರುವ ಜನಪ್ರಿಯ ಗ್ರಂಥವಾಗಿದೆ. ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಅನುಭವ, ವಿನ್ಯಾಸಗಳ ಕ್ಷೇತ್ರ ವಿಶಾಲವಾಗಿದೆ; ವಿವಿಧ ಮುಖಗಳಿಂದ ಕೂಡಿದೆ. ಅವರ ಕಥಾ ನಿರೂಪಣೆ ಅನುಕರಣೀಯವಾದುದು. ಅವರಿಗೆ ಕಥಾ ನಿರೂಪಣೆ ಮುಖ್ಯ, ಘಟನೆಯಲ್ಲ. ಮನುಷ್ಯ ಸ್ವಭಾವ ಮುಖ್ಯ ತಂತ್ರವಲ್ಲ. 1968ರಲ್ಲಿ ಮಾಸ್ತಿಯವರ ‘ಸಣ್ಣಕಥೆ’ಗಳು (ಸಣ್ಣಕಥೆಗಳು 12-13ರ ಸಂಯುಕ್ತ ಸಂಪುಟ) ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಸಾರ್ವಜನಿಕರು ಅವರನ್ನು ಸನ್ಮಾನಿಸಿದರು. ‘ಸಣ್ಣಕಥೆಗಳು’ ಎರಡನೇ ಸಂಪುಟ ‘ಗುರುದಕ್ಷಿಣೆ’ ಎಂಬ ಹೆಸರಿನಲ್ಲಿ ತಮಿಳು ಭಾಷೆಗೆ ಭಾಷಾಂತರವಾಗಿದೆ. ಮಾಸ್ತಿಯವರ ಕಥಾಸಾಹಿತ್ಯದಲ್ಲಿ ಚೆನ್ನಬಸವನಾಯಕ ಮತ್ತು ಚಿಕ್ಕವೀರರಾಜೇಂದ್ರ ಕಾದಂಬರಿಗಳು ಶಿಖರಪ್ರಾಯವಾಗಿವೆ. ಇವು ಕ್ರಮವಾಗಿ 1949 ಮಾತು 1956ರಲ್ಲಿ ಪ್ರಕಟವಾಗಿವೆ. ಇವೆರಡೂ ಐತಿಹಾಸಿಕ ಕಾದಂಬರಿಗಳು. ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ, ಪರಿಣಾಮಗಳಲ್ಲಿ ಎರಡು ಕಾದಂಬರಿಗಳಿಗೂ ಸಾಮ್ಯವಿದೆ. ಇವು ದುರಂತ ಕಾದಂಬರಿಗಳು. ಬಿದನೂರಿನ ನಾಯಕ ಮನೆತನದ ಕಥೆ ಚೆನ್ನಬಸವನಾಯಕ ಕಾದಂಬರಿಯ ವಸ್ತು. ಮನೆತನದ ಅವ್ಯವಸ್ಥೆ, ರಾಣಿಯ ಕೆಟ್ಟ ನಡತೆ, ತಾಯಿ ಮಕ್ಕಳ ಮೈಮನಸ್ಸು, ಅಕ್ರಮ ಸಂಬಂಧ, ಇತಿಹಾಸದ ಘಟನಾವಳಿಗಳು ಕಾದಂಬರಿಯಲ್ಲಿ ಮುಖ್ಯವಾಗಿವೆ. ಬಿದನೂರಿನ ಇತಿಹಾಸ ನಮ್ಮ ಜನಾಂಗದ ಭಾಗವಾಗಿ ವರ್ಣನೆಯಾಗಿದೆ. ಭೂತಕಾಲದ ಕತೆಯನ್ನು ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ ಕಾದಂಬರಿಯಲ್ಲಿ ನಡೆದಿದೆ. ಚೆನ್ನಬಸವನಾಯಕ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೂ ಅನುವಾದವಾಗಿವೆ. ಕೊಡಗಿನ ರಾಜಕೀಯದ ದುರವಸ್ಥೆ, ಕೊನೆಯ ರಾಜನ ದುರಂತ ಚಿಕ್ಕವೀರರಾಜೇಂದ್ರ ಕಾದಂಬರಿಯ ವಸ್ತು. ರಾಜನ ಲಂಪಟತನ, ದುಷ್ಟ ಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ ನಿರ್ಲಕ್ಷ್ಯ, ಸ್ವಾರ್ಥ, ಸ್ವೇಚ್ಛಾ ಪ್ರವೃತ್ತಿ, ಅದರಿಂದಾಗುವ ಅವನತಿ ಕಾದಂಬರಿಯಲ್ಲಿ ಪ್ರಧಾನವಾಗಿದೆ. ವೈಯಕ್ತಿಕ ಅಧಃಪತನ, ಐತಿಹಾಸಿಕ ಮುನ್ನಡೆಯ ಅನಿವಾರ್ಯತೆ ಏಕಕಾಲದಲ್ಲಿ ಚಿತ್ರಿತವಾಗಿದೆ. ಕಾದಂಬರಿಯಲ್ಲಿ ಸಾರ್ವಕಾಲಿಕವಾದ, ಶಾಶ್ವತವಾದ ಆಲೋಚನೆಯಿದೆ. ಅಂದಿನ ಕತೆಗೆ ಇಂದಿನ ಅರ್ಥ ತುಂಬಲು ಅವಕಾಶವಿದೆ. ಕೊಡಗಿನ ಅಂದಿನ ಆಡಳಿತದ ಕತೆ ಸಮಕಾಲೀನ ಆಡಳಿತಕ್ಕೆ ಅನ್ವಯಿಸುವಂತಿದೆ. ಕೊಡಗಿನ ಕೊನೆಯ ಅರಸ, ಚಿಕ್ಕವೀರರಾಜನ ದುರಂತ ಕಥೆ ಕಣ್ಣಿಗೆ ಕಟ್ಟುವಂತೆ, ಮನಕರಗುವಂತೆ ವರ್ಣನೆಯಾಗಿದೆ. ಚಿಕ್ಕವೀರರಾಜೇಂದ್ರ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು. ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಾಹಿತ್ಯ ಗ್ರಂಥವೆಂಬುದು ಪ್ರಶಸ್ತಿ ಆಯ್ಕೆಯ ಕಾರಣ. ಮಾಸ್ತಿಯವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ದೊಡ್ಡದೇನಲ್ಲ. ಮಾಸ್ತಿಯವರಿಗೆ ಬಂದ ಪ್ರಶಸ್ತಿ ಕನ್ನಡಕ್ಕೆ, ಕನ್ನಡಿಗರಿಗೆ, ಕನ್ನಡ ನಾಡಿಗೆ ಬಂದ ಪ್ರಶಸ್ತಿಯಾಗಿದೆ. ನ್ಯಾಷನಲ್ ಬುಕ್ ಟ್ರಸ್ಟ್ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಭಾರತದ ಎಲ್ಲ ಭಾಷೆಗಳಿಗೂ ಅನುವಾದಿಸಲು ಕಾರ್ಯ ಕೈಗೊಂಡಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ ಕಾವ್ಯಗಳಲ್ಲಿ ‘ಶ್ರೀನಿವಾಸ’ ದರ್ಶನ ಪ್ರಮುಖವಾಗಿದೆ. ದೇವರ ಲೀಲೆ, ಆತ್ಮ ನಿವೇದನೆ, ಪ್ರಕೃತಿ ಸೌಂದರ್ಯ, ಕನ್ನಡ ಪ್ರೇಮ, ಸಮಾಜದ ಅಂಕುಡೊಂಕು, ನಾಡುನುಡಿ ವ್ಯಕ್ತಿಗಳಿಗೆ ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣುತ್ತವೆ. ಶ್ರೀನಿವಾಸರ ಕಾವ್ಯ ಸರಳವಾದುದುದು. ಸುಂದರವಾದುದು. ಅವರ ಪದ್ಯ ಸಾಹಿತ್ಯದಲ್ಲಿ ಚೆಲುವು, ಹಾಸ್ಯ ಹೆಚ್ಚಾಗಿದೆ. ಗದ್ಯ ಪದ್ಯಗಳ ನಡುವಿನ ಮಡಿ ಮೈಲಿಗೆಯ ನಿರ್ಬಂಧವನ್ನು ತೆಗೆದುಹಾಕಿ ಕಾವ್ಯ ಬರೆದಿರುವುದು ಅವರ ವೈಶಿಷ್ಟ್ಯ. ಶ್ರೀನಿವಾಸರ ಮೊದಲ ಭಾವಗೀತೆಗಳ ಸಂಗ್ರಹ ‘ಬಿನ್ನಹ’ 1922ರಲ್ಲಿ ಪ್ರಕಟವಾಯಿತು. ಹೂವುಗಳು, ಕನ್ನೈದಿಲೆ, ನಾಲ್ವತ್ತರ ನಲುಗು, ಕೊಂಬು, ಕೋಗಿಲೆ ಮೊದಲಾದ ಭಾವಗೀತೆಗಳು ವಿಶಿಷ್ಟವಾಗಿವೆ. ಕನ್ನಡ ನವೋದಯ ಕಾವ್ಯದಲ್ಲಿ ಶ್ರೀನಿವಾಸರ ಕಾವ್ಯಕ್ಕೆ ಚಾರಿತ್ರಿಕ ಮಹತ್ವವಿದೆ. ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ ಮುಂತಾದ ಕವನ ಸಂಗ್ರಹಗಳಲ್ಲಿ ಭಾವಗೀತೆಗಳ ವೈವಿಧ್ಯವನ್ನು ಕಾಣಬಹುದು. ಕಥನ ಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ಧಿ ಗಮನಾರ್ಹ. ಗದ್ಯದಲ್ಲಾಗಲೀ, ಪದ್ಯದಲ್ಲಾಗಲೀ ಕಥೆ ಹೇಳುವುದರಲ್ಲಿ ಒಂದೇ ರೀತಿಯ ಪರಿಣತಿ ಕಂಡುಬರುತ್ತದೆ. ಸರಳರಗಳೆಯನ್ನು ಸಾರ್ಥಕವಾಗಿ ಬಳಸಿದ್ದಾರೆ. 1940ರಲ್ಲಿ ಪ್ರಕಟವಾದ ಗೌಡರ ಮಲ್ಲಿ, ಅನಂತರ ಬೆಳಕುಕಂಡ ನವರಾತ್ರಿ, ಮೂಕನ ಮಕ್ಕಳು, ರಾಮನವಮಿ ಸಂಗ್ರಹಗಳಲ್ಲಿ ಶ್ರೀನಿವಾಸರ ಕಥನಗೀತೆಗಳು ಅಡಕವಾಗಿವೆ. ಕನ್ನಡ ನವೋದಯದ ಕಾಲದಲ್ಲಿ ರಚನೆಯಾದ ಅವರ ಕಥನಗೀತೆಗಳಲ್ಲಿ ಚಾರಿತ್ರಿಕವಾದ, ಸಾಹಿತ್ಯಕವಾದ, ಸುಸಂಸ್ಕೃತವಾದ ಮೌಲಿಕ ಗುಣಗಳಿವೆ. ಮದಲಿಂಗನ ಕಣಿವೆ, ಗೌಡರ ಮಲ್ಲಿ, ಸೋಜಿಗದ ಹೊಳಲು, ದೇಶಾಚಾರ, ಗುಂಡುಸೂಜಿ ಮುಂತಾದ ಕಥನಗೀತೆಗಳು ಉತ್ತಮವಾಗಿವೆ. ಶ್ರೀನಿವಾಸರ ಕಾವ್ಯ ಪ್ರಕಾರದ ಆಚಾರ್ಯ ಕೃತಿ ‘ಶ್ರೀರಾಮಪಟ್ಟಾಭಿಷೇಕ’. ಸರಳ ರಗಳೆಯನ್ನು ಸಹಜವಾಗಿ ದುಡಿಸಿಕೊಂಡಿರುವ ಗ್ರಂಥ. ಶ್ರೀರಾಮನ ಪಟ್ಟಾಭಿಷೇಕವನ್ನು ಕೇಂದ್ರವಾಗಿರಿಸಿ ಸಂಪೂರ್ಣ ರಾಮಾಯಣದ ಕತೆಯನ್ನು ರೂಪಿಸಿರುವ ಬೃಹತ್ ಕೃತಿ. ಇದು ಶ್ರೀನಿವಾಸರ ಮಹತ್ವಾಕಾಂಕ್ಷೆಯ ಕಾವ್ಯವೂ ಹೌದು. ಒಂಬತ್ತು ಸಾವಿರ ಸಾಲುಗಳಿಗೆ ಮಿಕ್ಕಿರುವ ಈ ದೀರ್ಘ ಕಾವ್ಯದಲ್ಲಿ ಸಂಪ್ರದಾಯಬದ್ಧವಾದ ಹಾಗೂ ಹೊಸ ಆಯಾಮದ ಅಂಶಗಳನ್ನೊಳಗೊಂಡ ರಾಮಾಯಣದ ಕಥೆಯನ್ನು ಕಾಣಬಹುದು. ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯ 1972ರಲ್ಲಿ ಪ್ರಕಟವಾಯಿತು. ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ. 1923ರಲ್ಲಿ ಪ್ರಕಟವಾದ ‘ಶಾಂತಾ’ ಅವರ ಮೊದಲ ನಾಟಕ. ‘ಮಂಜುಳಾ’ ಎಂಬುದು ಸಾಮಾಜಿಕ ನಾಟಕ. ಉಳಿದವು ಪುರಾಣ ಹಾಗೂ ಇತಿಹಾಸದಿಂದ ಪ್ರೇರಣೆ ಪಡೆದಿವೆ. ಕಾಡುಕುರುಬರಿಗೆ ಸಂಬಂಧಿಸಿದ, ಐತಿಹಾಸಿಕ ಅಂಶಗಳನ್ನೊಳಗೊಂಡ ‘ಕಾಕನಕೋಟೆ’ ಮಾಸ್ತಿಯವರ ಉತ್ತಮ ನಾಟಕ. ಗೌತಮ ಬುದ್ಧನ ಹೆಂಡತಿ ಯಶೋಧರೆಯ ಮಾನಸಿಕ ತುಮುಲವನ್ನು ಪ್ರಧಾನವಾಗಿ ಚಿತ್ರಿಸಿರುವ ‘ಯಶೋಧರಾ’ ಅತ್ಯುತ್ತಮ ನಾಟಕ. ಮಹಾಕವಿ ಕಾಳಿದಾಸನ ಬಗೆಗೆ ಇರುವ ಕಟ್ಟುಕತೆ, ಇತಿಹಾಸವನ್ನು ಬಳಸಿಕೊಂಡು ರಚಿಸಿರುವ ಏಳು ಅಂಕಗಳ ನಾಟಕ ‘ಕಾಳಿದಾಸ’. ಇದಕ್ಕೆ 1983ರಲ್ಲಿ ‘ವರ್ಧಮಾನ ಪ್ರಶಸ್ತಿ’ ಸಂದಿತು. ಮಾಸ್ತಿಯವರ ಸುಸಂಸ್ಕೃತ ಮನೋಧರ್ಮ ಅವರ ನಾಟಕ ರಚನೆಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಕನ್ನಡ ನಾಟಕ ಕ್ಷೇತ್ರಕ್ಕೆ ಮಾಸ್ತಿಯವರ ನಾಟಕ ಕೃಷಿ ಸಾಕಷ್ಟು ಕಸುವು ತುಂಬಿದೆ. ಷೇಕ್ಸ್ ಪಿಯರ್ ಮಹಾಕವಿಯ ಕೆಲವು ನಾಟಕಗಳನ್ನು ಚಂಡಮಾರುತ, ದ್ವಾದಶ ರಾತ್ರಿ, ಲಿಯರ್ ಮಹಾರಾಜ ಮೊದಲಾದ ಹೆಸರುಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ಧಾರೆ. ಮಾಸ್ತಿಯವರ ಭಾಷಾಂತರ ನಾಟಕಗಳಿಂದ ಕನ್ನಡ ನಾಟಕಸಾಹಿತ್ಯ ಗರಿಗಟ್ಟಿಕೊಳ್ಳಲು ಸಹಾಯಕವಾಗಿದೆ. ಮಾಸ್ತಿಯವರ ಆತ್ಮಕಥೆ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ‘ಭಾವ’ದಲ್ಲಿ ಅವರ ಬದುಕಿನ ಮೂಲಧಾತುಗಳ ದಾಖಲೆಗಳಿವೆ. ನವರತ್ನ ರಾಮರಾವ್, ರವೀಂದ್ರನಾಥ ಠಾಗೂರರು, ಶ್ರೀರಾಮಕೃಷ್ಣ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವೇದಗಳ ಕಾಲದಿಂದ ಬೆಳೆದುಬಂದ ಧರ್ಮ, ಸಂಸ್ಕೃತಿ, ಪರಂಪರೆಗಳ ಅವಲೋಕನವಾದ ‘ಅಂತರಗಂಗೆ’; ವಾಲ್ಮೀಕಿ ರಾಮಾಯಣವನ್ನು ಕುರಿತ ವಿಮರ್ಶಾತ್ಮಕ ಅಧ್ಯಯನವಾದ ‘ಆದಿಕವಿ ವಾಲ್ಮೀಕಿ’; ಅಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದ ಮುಖ್ಯ ಘಟ್ಟಗಳನ್ನು ವಿವೇಚಿಸುವ ‘ನಮ್ಮ ಹೊಸ ಸಾಹಿತ್ಯದ ಆರಂಭ’; ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಮೂಡಿರುವ ‘ಧರ್ಮಸಂರಕ್ಷಣೆ’; ಮಹಾಭಾರತ ಕಾವ್ಯಸಂಗ್ರಹವಾದ ‘ಭಾರತ ತೀರ್ಥ’ ಗ್ರಂಥಗಳು ಮಾಸ್ತಿಯವರ ಪರಿಪಕ್ವ ಬದುಕಿನ, ಉದಾತ್ತ ಚಿಂತನೆಯ ವೈಚಾರಿಕ ಗ್ರಂಥಗಳಾಗಿವೆ. ಭಾರತ ಮತ್ತು ಪಾಶ್ಚಾತ್ಯ ಕೃತಿಗಳು ವಿವೇಚನೆಯನ್ನೊಳಗೊಂಡ ‘ವಿಮರ್ಶೆ’ಗಳು, ನೂರಾರು ‘ಪ್ರಸಂಗ’ಗಳು, ವಿಚಾರಸೂಕ್ತಿಗಳು, ಕನ್ನಡದ ಕೆಚ್ಚನ್ನು ಉತ್ತೇಜಿಸುವ ಲೇಖನಗಳು ಅವರಿಂದ ಸೃಷ್ಟಿಯಾಗಿವೆ. ಕರ್ಣಾಟ ಭಾರತ ಕಥಾಮಂಜರಿ, ರವೀಂದ್ರ ಪ್ರಶಸ್ತಿ, ಸಂಭಾವನೆ, ಸರ್ ಎಂ. ವಿಶ್ವೇಶ್ವರಯ್ಯ ಮೊದಲಾದ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕೆಲವು ಕನ್ನಡ ಕೃತಿಗಳನ್ನು ಸ್ವತಃ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅವರ ಇಂಗ್ಲಿಷ್ ಭಾಷೆಯ ಬರಹ ಕೂಡಾ ಕನ್ನಡದಷ್ಟೇ ಆಕರ್ಷಕವಾಗಿದೆ. ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ, ಸತ್ವದಲ್ಲಿ, ಗುಣದಲ್ಲಿ, ಗಾತ್ರದಲ್ಲಿ, ವೈವಿಧ್ಯದಲ್ಲಿ ದೊಡ್ಡವು. ಕತೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120 ಗ್ರಂಥಗಳನ್ನು ಬರೆದಿದ್ದಾರೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ 17 ಗ್ರಂಥಗಳನ್ನು ರಚಿಸಿದ್ದಾರೆ. ಸುಮಾರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೃಷ್ಟಿಸಿದ್ದಾರೆ. ಅವರು ತಾವು ಸಾಹಿತಿಯಾದುದಲ್ಲದೆ ಹಲವರು ಮಹಾನೀಯರನ್ನು ಸಾಹಿತಿಗಳಾಗಲು ಸ್ಫೂರ್ತಿ ನೀಡಿದ್ದಾರೆ. ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಹಲವರ ಗ್ರಂಥಗಳನ್ನು ಪ್ರಕಟಿಸಿ, ಹಲವರಿಗೆ ನಾನಾ ರೀತಿಯಲ್ಲಿ ನೆರವು ನೀಡಿ ಬೆಂಬಲಿಸಿದ್ದಾರೆ. ಕನ್ನಡದಲ್ಲಿ ಸಾಹಿತಿಗಳ ಪಡೆ ಸೃಷ್ಟಿಯಾಗಲು ಸಹಕರಿಸಿದ್ದಾರೆ. ಅವರ ಬದುಕು ಬರಹ ಹಲವು ಕೃತಿಗಳಿಗೆ, ಕೃತಿಗಾರರಿಗೆ ಪ್ರೇರಣೆ ನೀಡಿದೆ. ಮಾಸ್ತಿಯವರನ್ನು ಕುರಿತು ಇತರರಿಂದ ಮೌಲಿಕ ಗ್ರಂಥಗಳು ಬೆಳಕು ಕಂಡಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು ಇಂಗ್ಲಿಷ್. ಬದುಕಿದ್ದು, ಬರೆದದ್ದು ಕನ್ನಡ. ಅವರು ಮೊದಲಿನಿಂದಲೂ ಕನ್ನಡದ ಪರವಾಗಿ ದನಿಗೂಡಿಸಿದವರು. 1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ ವಿದ್ಯಾವಂತರು ಹಿಂದುಮುಂದು ನೋಡುತ್ತಿದ್ದರು. ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ ಬರೆದರು. ಕನ್ನಡದ ಏಳಿಗೆಗೆ ಹೋರಾಡಿದರು. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಸಹಾಯವಾಯಿತು. ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು. ಕರ್ನಾಟಕ ಏಕೀಕರಣಕ್ಕೆ ಅವರು ನಿಷ್ಠೆಯಿಂದ ದುಡಿದರು. ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು ಎಚ್ಚರಿಸಿದರು. ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು. ಮಾಸ್ತಿಯವರು ಪತ್ರಿಕೊದ್ಯಮಿಯೂ ಹೌದು. 1944ರಿಂದ 1965ರವರೆಗೆ ‘ಜೀವನ’ ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು. ‘ಜೀವನ’ ಪತ್ರಿಕೆಯ ಮೂಲಕ ಅನೇಕ ಸಾಹಿತಿಗಳ ಕೃತಿಗಳು ಬೆಳಕು ಕಂಡಿವೆ. ‘ಜೀವನ’ ಪತ್ರಿಕೆಯ ಸಂಪಾದಕೀಯದಲ್ಲಿ ಮೂಡಿದ ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯ, ಧರ್ಮ, ದೇವರು, ಸಾಮಾಜಿಕ, ಆರ್ಥಿಕ ವಿಚಾರ ಮೊದಲಾದ ಹಲವು ಹತ್ತು ವಿಷಯಗಳ ಬಗೆಗಿನ ಲೇಖನಗಳಲ್ಲಿ ಮಾಸ್ತಿಯವರ ಭಾವ ಮಿಂಚಿದೆ. ಈ ಬರಹಗಳು ‘ಜೀವನ ಸಂಪಾದಕೀಯ’ ಎಂಬ ಹೆಸರಿನ ಗ್ರಂಥದಲ್ಲಿ ಲಭ್ಯವಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಮಾಸ್ತಿಯವರ ‘ಜೀವನ’ ಮರೆಯಲಾಗದ ನೆನಪು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ಸ್ಥಳಗಳಲ್ಲಿ ಅನುಭವ ಗಳಿಸಿದವರು. ಜನಸಾಮಾನ್ಯರ ಜನಜೀವನವನ್ನು ಹತ್ತಿರದಿಂದ ಗಮನಿಸಿದವರು. ನಮ್ಮ ಜನರ ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಬದುಕಿನ ರೀತಿ ನೀತಿ ಮೊದಲಾದವುಗಳ ಬಗೆಗೆ ಆಸಕ್ತಿ ತಳೆದವರು. ಶುಚಿಯಾದ, ಆದರ್ಶವಾದ ಸಂಪ್ರದಾಯಕ್ಕೆ ನಿಷ್ಠೆ ತೋರಿದವರು. ರಾಜಮಹಾರಾಜರ ಗೌರವಕ್ಕೆ ಪಾತ್ರರಾದವರು. ಬ್ರಿಟಿಷರ ಆಡಳಿತವನ್ನು, ಬ್ರಿಟಿಷ್ ಆಡಳಿತಗಾರರನ್ನು ಕಣ್ಣಾರೆ ಕಂಡವರು. ಸಂಪ್ರದಾಯಬದ್ಧವಾದ ಮನೆತನದಲ್ಲಿ ಹುಟ್ಟಿ ಬೆಳೆದವರು. ದೊಡ್ಡವರನ್ನು, ದೊಡ್ಡ ಬದುಕನ್ನು ನೋಡಿದವರು; ಅನುಸರಿಸಿದವರು. ತಮ್ಮಂತೆ ಇತರರೂ ಅನುಸರಿಸಲು ಆಶಿಸಿದವರು. ಜನರ ಬದುಕು ದೊಡ್ಡದಾಗಲು ಹಾರೈಸಿದವರು. ಈ ಅಂಶಗಳಿಗೆ ಒತ್ತುಕೊಡುವ ವಸ್ತು, ಪಾತ್ರ, ಸನ್ನಿವೇಶ ನಿರೂಪಣೆಗಳು ಮಾಸ್ತಿಯವರ ಕೃತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ. ಭಾರತ ದೇಶದಲ್ಲಿ ಕಾಣಬಹುದಾದ, ಕಾಣಬೇಕಾದ ಪಾತ್ರಗಳು ಅವರವು. ಮಾಸ್ತಿಯವರಲ್ಲಿ ಆದರ್ಶ ಪಾತ್ರಗಳು ಅಧಿಕ. ದುಷ್ಟರು, ಕ್ರೂರಿಗಳು, ಅಯೋಗ್ಯರು ಎನ್ನಬಹುದಾದ ಪಾತ್ರಗಳು ಕಡಿಮೆ. ಇದ್ದರೂ ಅವುಗಳ ಬಗೆಗೆ ಇನ್ನಿಲ್ಲದ ಅನುಕಂಪ. ದುಷ್ಟತನವೂ ದೌರ್ಬಲ್ಯ ಎನ್ನುವುದು ಅವರ ಮನೋಧರ್ಮ. ಆದರ್ಶ ಸ್ತ್ರೀ ಪಾತ್ರಗಳ ಬಗೆಗೆ ಮಾಸ್ತಿಯವರಿಗೆ ಅಪಾರ ಒಲವು. ಮಾಸ್ತಿಯವರ ಎಲ್ಲ ಕೃತಿಗಳಲ್ಲಿ ಸರಳತೆಗೆ ಮೊದಲ ಪಟ್ಟ. ಸಾಧಾರಣ ಮಾತುಗಳಿಂದ ಅಸಾಧಾರಣ ಚಿತ್ರ ನಿರ್ಮಿಸುವ ಕಲೆ ಅವರದು. ಮಾಸ್ತಿಯವರಿಗೆ ಸಂದ ಗೌರವಗಳು ಅನೇಕ. ಇಂಥಹ ಹಿರಿಯರಿಗೆ ಗೌರವ ಸಲ್ಲಿಸುವುದು ಆ ಗೌರವಕ್ಕೇ ಹಿರಿತನವಲ್ಲವೇ! ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದ್ದು. 1986ರಲ್ಲಿ ಅವರು ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು. ಗಾಂಧೀಬಜಾರಿನಲ್ಲಿ ಚಾಕೊಲೇಟು, ಪೆಪ್ಪರಮೆಂಟುಗಳನ್ನು ಮಕ್ಕಳಿಗಾಗಿ ಕೋಟಿನ ಜೇಬಿನಲ್ಲಿ ತುಂಬಿಕೊಂಡು, ಬದುಕಿನ ಕಲೆಯನ್ನು, ನಯ ವಿನಯ, ಸೌಜನ್ಯ, ಸಂಸ್ಕೃತಿ, ಹಸನ್ಮುಖ ಪ್ರೀತಿ ಸೊಬಗುಗಳನ್ನು ಸರ್ವಲೋಕಗಳಿಗೂ ಸಾಲುವಷ್ಟು ತಮ್ಮನ್ನೇ ಮಾದರಿಯಾಗಿರಿಸಿಕೊಂಡು ನಡೆದಾಡುತ್ತಿದ್ದ ಈ ಹಿರಿಯ ಜೀವನವನ್ನು ಕಂಡ ಸೌಭಾಗ್ಯವನ್ನು ನೆನೆದಾಗ, ಅವರ ಬಳಿಯಲ್ಲಿ ಸುಳಿದ ನಮ್ಮ ಸುಕೃತವನ್ನು ನೆನೆಸಿಕೊಂಡು ಹೃದಯ ಉಕ್ಕಿ ಬರುತ್ತದೆ. ಮಾಸ್ತಿಯಂತಹ ಇಂಥಹ ಶ್ರೇಷ್ಠ ಆಸ್ತಿಗಳು ನಮ್ಮ ಉಳಿದ ಜೀವನದಲ್ಲೂ, ಮುಂದಿನ ಯುಗ ಯುಗಗಳ ಜೀವನದಲ್ಲೂ ಮರಳೀತೆ ಎಂದು ಮಾಸ್ತಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟ ಆ ವಿಧಾತನ ಬಳಿ ಮೊರೆಯಿಡುವಂತಾಗುತ್ತಿದೆ.>

ಭಾರತದ ರಾಷ್ಟ್ರಧ್ವಜ

1. ‎ರಾಷ್ಟ್ರಧ್ವಜ‬ » ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 » ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ » ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. » ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. » ಭಾರತದ ಧ್ವಜಸಂಹಿತೆ (flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. » ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. » ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. » ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. » ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು » ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. » ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.

Monday, 5 June 2017

10ನೇ ತರಗತಿಯ ಇತಿಹಾಸ

ಇತಿಹಾಸ :- 10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು 10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು #ಇತಿಹಾಸ •1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ •1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ •1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) •1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ) •1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ. •1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) •1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) •1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ ) •1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ ) •1784 – ಪಿಟ್ಸ್ ಇಂಡಿಯಾ ಶಾಸನ •1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ ) •1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ ) •1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ ) •1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ •1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ ) •1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ •1858 – ಬ್ರಿಟನ್ ರಾಣಿಯ ಘೋಷಣೆ •1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ ) •1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ •1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ •1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ ) •1905 – ಬಂಗಾಳ ವಿಭಜನೆ •1906 – ಮುಸ್ಲಿಂ ಲೀಗ್ ಸ್ಥಾಪನೆ •1920-1947 – ಗಾಂಧೀಯುಗ •1920 - ಅಸಹಕಾರ ಚಳುವಳಿ •1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ) •1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ ) •1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ ) •1930 ಮೊದಲ ದುಂಡು ಮೇಜಿನ ಅಧಿವೇಶನ •1931 – ಎರಡನೆಯ ದುಂಡು ಮೇಜಿನ ಅಧಿವೇಶನ •1932 – ಮೂರನೆಯ ದುಂಡು ಮೇಜಿನ ಅಧಿವೇಶನ •1942 ಕ್ವಿಟ್ ಇಂಡಿಯಾ ಚಳುವಳಿ •1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ ) •1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ ) •1950 – ಜನವರಿ 26- ಭಾರತ ಸಂವಿಧಾನ ಜಾರಿಗೆ •1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ ) •1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ •1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ •1914-18 – ಮೊದಲ ಮಹಾಯುದ್ಧ •1917 – ರಷ್ಯಾ ಕ್ರಾಂತಿ •1939-45 – ಎರಡನೆಯ ಮಹಾಯುದ್ಧ ರಾಜ್ಯಶಾಸ್ತ್ರ •1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ •2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು ) •1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ •2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ •1986 – ಲೋಕಾಯುಕ್ತ ಅದಿನಿಯಮ ಜಾರಿಗೆ •1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ ) •1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ •1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ •1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ •1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ •1946 – ಯುನೆಸ್ಕೋ ಸ್ಥಾಪನೆ •1946 – ಯುನಿಸೆಫ್ ಸ್ಥಾಪನೆ •1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ •1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ •1967 ಆಸಿಯನ್ ಸ್ಥಾಪನೆ •1963 ಆಫ್ರಿಕನ್ ಒಕ್ಕೂಟ ಸ್ಥಾಪನೆ. ಸಮಾಜಶಾಸ್ತ್ರ •1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ •1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ •1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ •1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ ) •1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ •2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ •1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ ) •1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ. ಅರ್ಥಶಾಸ್ತ್ರ •1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ ) •1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ ) •1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ •1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಕನ್ನಡದ ಮೊದಲುಗಳು

ಜ್ಞಾನಸಂಪದ ಕನ್ನಡದ ಮೊದಲುಗಳು 1. ಅಚ್ಚ ಕನ್ನಡದ ಮೊದಲ ದೊರೆ - ಮಯೂರವರ್ಮ 2. ಕನ್ನಡದ ಮೊದಲ ಕವಿ - ಪಂಪ 3. ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ 4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ - ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ 5. ಕನ್ನಡದ ಮೊದಲ ಲಕ್ಷಣ ಗ್ರಂಥ - ಕವಿರಾಜಮಾರ್ಗ 6. ಕನ್ನಡದ ಮೊದಲ ನಾಟಕ - ಮಿತ್ರವಿಂದ ಗೋವಿಂದ 7. ಕನ್ನಡದ ಮೊದಲ ಮಹಮದೀಯ ಕವಿ - ಶಿಶುನಾಳ ಷರೀಪ 8. ಕನ್ನಡದ ಮೊದಲ ಕವಯಿತ್ರಿ - ಅಕ್ಕಮಹಾದೇವಿ 9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ 10. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ - ಚೊರಗ್ರಹಣ ತಂತ್ರ 11. ಕನ್ನಡದ ಮೊದಲ ಛಂದೋಗ್ರಂಥ - ಛಂದೋಂಬುಧಿ (ನಾಗವರ್ಮ) 12. ಕನ್ನಡದ ಮೊದಲ ಸಾಮಾಜಿಕ ನಾಟಕ - ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ 13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ 14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ - ವ್ಯವಹಾರ ಗಣಿತ 15. ಕನ್ನಡದ ಮೊದಲ ಕಾವ್ಯ - ಆದಿಪುರಾಣ 16. ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ 17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ - ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ 18. ಕನ್ನಡದ ಮೊದಲ ಪತ್ರಿಕೆ - ಮಂಗಳೂರು ಸಮಾಚಾರ 19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು - ಚಂದ್ರರಾಜ 20. ಕನ್ನಡದಲ್ಲಿ ಮೊದಲು ಕಥೆ ಬರೆದವರು - ಪಂಜೆಮಂಗೇಶರಾಯರು 21. ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ - ಒಲುಮೆ 22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು - ಹೆಚ್.ವಿ.ನಂಜುಂಡಯ್ಯ 23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ - ಆರ್.ನರಸಿಂಹಾಚಾರ್ 24. ಕನ್ನಡದ ಮೊದಲ ವಚಚನಕಾರ - ದೇವರದಾಸಿಮಯ್ಯ 25. ಹೊಸಗನ್ನಡದ ಮೊದಲ ಮಹಾಕಾವ್ಯ - ಶ್ರೀರಾಮಾಯಣ ದರ್ಶನಂ 26. ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು 27. ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು - ಆರ್.ಎಫ್.ಕಿಟೆಲ್ 28. ಕನ್ನಡದ ಮೊಟ್ಟಮೊದಲ ಸಮಕಲನ ಗ್ರಂಥ - ಸೂಕ್ತಿ ಸುಧಾರ್ಣವ 29. ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಂಗಳೂರು (1915) 30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ - ಕುವೆಂಪು 31. ಕನ್ನಡದ ಮೊದಲ ವಿಶ್ವಕೋಶ - ವಿವೇಕ ಚಿಂತಾಮಣಿ 32. ಕನ್ನಡದ ಮೊದಲ ವೈದ್ಯಗ್ರಂಥ - ಗೋವೈದ್ಯ 33. ಕನ್ನಡದ ಮೊದಲ ಪ್ರಾಧ್ಯಾಪಕರು - ಟಿ.ಎಸ್.ವೆಂಕಣ್ಣಯ್ಯ 34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ - ಮಂದಾನಿಲ ರಗಳೆ

ಸಾಮಾನ್ಯ ಜ್ಞಾನ

#ಜ್ಞಾನಸಂಪದ ಕೆಳಕಂಡ ಯಾವ ಸ್ಥಳದಲ್ಲಿ ವಿಶ್ವದ ಮೊಟ್ಟಮೊದಲ ವಿಶ್ವ ವಿದ್ಯಾಲಯ ಸ್ಥಾಪನೆ ಆಗಿತ್ತು? A. ಹಾರ್ವರ್ಡ್ ವಿ.ವಿ. B. ಕೆಂಬ್ರಿಡ್ಜ್ ವಿ.ವಿ. C. ತಕ್ಷಶಿಲೆ D. ಆಕ್ಸಫರ್ಡ್ C✔️✔️ 'Dewan Rakyat' ಇದು ಯಾವ ದೇಶದ ಸಂಸತ್ತಿನ ಹೆಸರು? A. ಮಲೇಶಿಯಾ B. ಟರ್ಕಿ C. ಮಂಗೋಲಿಯಾ D. ತೈವಾನ್ A✔️✔️ "ಒಂದು ಕಣ್ಣಿಗೆ ಒಂದು ಕಣ್ಣಿನ ಸಿದ್ಧಾಂತ ಇಡೀ ವಿಶ್ವವನ್ನು ಕುರುಡಾಗಿಸುತ್ತದೆ" ಇದು ಯಾರ ಪ್ರಸಿದ್ಧ ಹೇಳಿಕೆಯಾಗಿದೆ? A. ಜವಾಹರಲಾಲ್ ನೆಹರು B. ನೆಲ್ಸನ್ ಮಂಡೇಲಾ C. ಮಹಾತ್ಮ ಗಾಂಧಿ D. ಗೌತಮ ಬುದ್ಧ C✔️✔️ ನೆದರ್ಲೆಂಡ್'ನ ಹೇಗ್ ನಗರದಲ್ಲಿರುವ ಅಂತಾರಾಷ್ಟೀಯ ನ್ಯಾಯಾಲಯದಲ್ಲಿ ಎಷ್ಟು ಜನ ನ್ಯಾಯಾಧೀಶರಿರುತ್ತಾರೆ? A. 15 B. 18 C. 20 D. 25 A✔️✔️✔️ ಕೆಳಕಂಡ ಯಾರು ಫ್ರಾನ್ಸ್ ದೇಶದ ಅತ್ಯುನ್ನತ ಪುರಸ್ಕಾರ 'ಲೆಜೆಂಡ್ ಆಫ್ ಪ್ಲಾನೆಟ್' ಪಡೆದರು? A. ಮೇಘಾ ಪಾಟ್ಕರ್ B. ಅರುಣಾ ರಾಯ್ C. ವಂದನಾ ಶಿವಾ D. ಬಿಂದೇಶ್ವರ್ ಪಾಠಕ್ D✔️✔️ ಹವಾಮಾನ ಸಂಬಂಧಿತ ನಕಾಶೆಯಲ್ಲಿ ಸಮಾನ ಮಳೆಯಾಗುವ ಪ್ರದೇಶಗಳನ್ನು ಜೋಡಿಸುವ ಒಂದು ರೇಖೆಯಿದ್ದು, ಅದನ್ನು ಏನೆಂದು ಕರೆಯುತ್ತಾರೆ? A. ಐಸೋಕ್ಲಿನಿಕ್ B. ಐಸೊಬಾರ್ C. ಐಸೊಜೆನಿಕ್ D. ಐಸೊಹೈಟ್ D✔️✔️✔️ 'ದಿ ಆರ್ಗ್ಯುಮಂಟೇಟಿವ್ ಇಂಡಿಯನ್' ಹೆಸರಿನ ಪುಸ್ತಕವನ್ನು ಕೆಳಕಂಡ ಯಾರು ಬರೆದಿದ್ದಾರೆ? A. ಅಮರ್ತ್ಯ್ ಸೆನ್ B. ಚೇತನ್ ಭಗತ್ C. ವಿಕ್ರಮ್ ಸೇಠ್ D. ಅರುಂಧತಿ ರಾಯ್ A✔️✔️ ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳ ಸಂಘಟನೆ 'ಒಪೆಕ್'(OPEC) ನ ಪ್ರಧಾನ ಕಚೇರಿ ಎಲ್ಲಿದೆ? A. ಫಿಲ್'ಡೆಲ್ಪಿಯಾ B. ಅಂಕಾರಾ C. ವಿಯೆನ್ಕಾ D. ಬಗ್ದಾದ್ C✔️✔️ ಕೆಳಕಂಡ ಯಾವುದನ್ನು 'ಪರ್ಲ್ ಆಫ್ ದಿ ಓರಿಯೆಂಟ್' ಎಂದು ಕರೆಯಲಾಗುತ್ತದೆ? A. ಫಿಲ್"ಡೆಲ್ಫಿಯಾ B. ಚಿಕಾಗೊ C. ಹಾಂಕಾಂಗ್ D. ಸಿಂಗಪುರ C✔️✔️ ಮಹಿಳೆಯರ ಸುರಕ್ಷತೆ ಕುರಿತಂತೆ ಈಚೆಗಷ್ಟೇ ಯಾವ ರಾಜ್ಯ ಸರ್ಕಾರ 'ಆಪರೇಷನ್ ದುರ್ಗಾ' ಕಾರ್ಯಾಚರಣೆಗೆ ಚಾಲನೆ ನೀಡಿತು? A. ಪಂಜಾಬ್ B. ಉತ್ತರ ಪ್ರದೇಶ C. ಹರಿಯಾಣ D. ಮಧ್ಯಪ್ರದೇಶ C✔️✔️✔️ ಹಡಗು ಸಚಿವಾಲಯದ ಸ್ವಚ್ಛತೆಯ ಮಾನದಂಡಗಳ ಪ್ರಕಾರ, ಕೆಳಕಂಡ ಯಾವ ಬಂದರು ಪ್ರಥಮ ಸ್ಥಾನ ಗಳಿಸಿತು? A. ಕಾಂಡ್ಲಾ ಬಂದರು B. ಕೋಚಿನ್ ಬಂದರು C. ಹಲ್ದಿಯಾ ಬಂದರು D. ಮಂಗಳೂರು ಬಂದರು C✔️✔️✔️ ಕ್ರೀಡಾ ಕ್ಷೇತ್ರದಲ್ಲಿನ ಸಹಕಾರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಭಾರತದ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು? A. ಅಮೆರಿಕ B. ಆಸ್ಟ್ರೇಲಿಯಾ C. ಕೆನಡಾ D. ಬ್ರೆಜಿಲ್ B✔️✔️✔️ ಭಾರತದ ಮೊದಲ ಔದ್ಯೋಗಿಕ ರೊಬೊ 'TAL Barbo'ನ್ನು ಕೆಳಕಂಡ ಯಾವ ಕಂಪನಿ ಬಿಡುಗಡೆಗೊಳಿಸಿದೆ ? A. ಟಾಟಾ ಮೋಟಾರ್ಸ್ B. ಮಾರುತಿ ಸುಜುಕಿ C. ಮಹೀಂದ್ರಾ ಅಂಡ್ ಮಹೀಂದ್ರಾ D. ಐಆರ್ ಮೋಟಾರ್ಸ್ A✔️✔️✔️ ಏಡ್ಸ್ ರೋಗದ ಕುರಿತಾಗಿ ಸಂಶೋಧನೆ ನಡೆಸಿದ್ದ ಡಾ. ಮಾರ್ಕ್ ವೇಯ್ನಬರ್ಗ್ ಈಚೆಗೆ ನಿಧನರಾದರು. ಅವರು ಯಾವ ದೇಶದವರು? A. ಕೆನಡಾ B. ಫಿನ್ಲೆಂಡ್ C. ನಾರ್ವೆ D. ಆಸ್ಟ್ರೇಲಿಯಾ A✔️✔️✔️ ಖಿಲಾಪತ್ ಚಳುವಳಿಯ ಜತೆಗೆ ಹಮ್ಮಿಕೊಂಡಿದ್ದ ಚಳುವಳಿ ಯಾವುದು? A. ಸ್ವದೇಶಿ ಚಳುವಳಿ B. ಹೋಮರೂಲ್ ಚಳುವಳಿ C. ನಾಗರಿಕ ಕಾಯ್ದೆಭಂಗ ಚಳುವಳಿ D. ಅಸಹಕಾರ ಚಳುವಳಿ D✔️✔️ ಭಾರತದ ರಾಷ್ಟ್ರಪತಿಗಳು ಸಂವಿಧಾನದ ಯಾವ ಅನುಚ್ಛೇದದಡಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು? A. ಅನುಚ್ಛೇದ 352 B. ಅನುಚ್ಛೇದ 353 C. ಅನುಚ್ಛೇದ 354 D. ಅನುಚ್ಛೇದ 360 D✔️✔️ ಸಂವಿಧಾನದ 74ನೇ ಅನುಚ್ಛೇದವು ಎಲ್ಲ ಅಧಿಕಾರಗಳನ್ನು ಯಾರಿಗೆ ಕೊಡುತ್ತದೆ? A. ರಾಷ್ಟ್ರಪತಿಗಳಿಗೆ B. ಪ್ರಧಾನಮಂತ್ರಿಗಳಿಗೆ C. ಸಚಿವ ಸಂಪುಟಕ್ಕೆ D. ಅಂಟಾರ್ಟಿ ಜನರಲ್'ರಿಗೆ C✔️✔️✔️ ಕೆಳಕಂಡ ಯಾವ ದೇಶಕ್ಕೆ ಲಿಖಿತ ಸಂವಿಧಾನ ಇಲ್ಲ? A. ಸ್ವಿಡ್ಜರ್ಲೆಂಡ್ B. ಅಮೆರಿಕ C. ಭಾರತ D. ಬ್ರಿಟನ್ D✔️✔️✔️ ಬಾಹ್ಯಾಕಾಶ ಒಪ್ಪಂದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರಗಳು ಯಾವ ವರ್ಷ ಒಪ್ಪಂದಕ್ಕೆ ಸಹಿ ಹಾಕಿದವು? A. 1945 B. 1952 C. 1962 D. 1967 C✔️✔️✔️ ಜೈವಿಕ ಸಿದ್ಧಾಂತ Organic Theory) ವಿಕಾಸದ ಪ್ರತಿಪಾದಕರು ಯಾರು? A. ಸ್ಪೆನ್ಸರ್ B. ಹಾಬ್ಸ್ C. ಲಾಕ್ D. ರೂಸೊ A✔️✔️✔️ ಪ್ರಯೋಜಕತಾವಾದದ ಮೂಲ ಪುರುಷ (Father of Utilitarianism) ಯಾರು? A. ಟಿ.ಎಚ್. ಗ್ರೀನ್ B. ಬೆಂಥಮ್ C. ಹಾಬ್ಸ್ D. ಮಿಲ್ B✔️✔️✔️ ವಿಶ್ವ ಸಂಸ್ಥೆಯ ಮಹಾಸಭೆಯು ಮಾನವ ಹಕ್ಕುಗಳ ಜಾಗತಿಕ ಘೋಷಣೆಯನ್ನು (Universal declaraction of Human Rights) ಯಾವ ವರ್ಷ ಮಾಡಿತು? A. 1942 B. 1945 C. 1948 D. 1952 C✔️✔️✔️ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ -2017ರ ಪ್ರಕಾರ ವಿಶ್ವದ ಸಂತೋಷದಾಯಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ? A. 97ನೇ B. 102ನೇ C. 112ನೇ D. 123ನೇ C✔️✔️ First Place Norway. In 2016 India position is 118th place✔️✔️✔️ ವೋಡಾಫೋನ್ ಹಾಗೂ ಐಡಿಯಾ ದೂರಸಂಪರ್ಕ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಮಾರ್ಚ್'ನಲ್ಲಿ ನೆರವೇರಿತು. ಅಂದಹಾಗೆ ವೋಡಾಫೋನ್ ಇದು ಯಾವ ದೇಶದ ದೂರಸಂಪರ್ಕ ಸಂಸ್ಥೆ? A. ಅಮೆರಿಕ B. ಬ್ರಿಟನ್ C. ಫ್ರಾನ್ಸ್ D. ಕೆನಡಾ B✔️✔️✔️ ಕರ್ನಾಟಕದ ಆಯ-ವ್ಯಯ -2017ರಲ್ಲಿ ಸ್ವಾತಂತ್ರ್ಯಯೋಧರ ಮಾಸಾಶನವನ್ನು 8,000ರೂ.ಗಳಿಂದ ಎಷ್ಟಕ್ಕೆ ಹೆಚ್ಚಿಸಲಾಯಿತು? A. 9,000ರೂ. B. 10,000ರೂ. C. 12,000ರೂ. D. 14,000ರೂ. B✔️✔️ ಟೆಸ್ಟ್ ಪಂದ್ಯವೊಂದರಲ್ಲಿ 525 ಎಸೆತ ಎದುರಿಸಿ ಚೇತೇಶ್ವರ ಪೂಜಾರ್ ಅವರು ಕೆಳಕಂಡ ಯಾರ ದಾಖಲೆಯನ್ನು ಮುರಿದರು? A. ಸುನಿಲ್ ಗವಾಸ್ಕರ್ B. ಕಪಿಲ್ ದೇವ್ C. ರಾಹುಲ್ ದ್ರಾವಿಡ್ D. ಸಚಿನ್ ತೆಂಡೂಲ್ಕರ್ C✔️✔️✔️ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಕೆಳಕಂಡ ಯಾವ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಈಚೆಗೆ ಪ್ರಮಾಣವಚನ ಸ್ವೀಕರಿಸಿದರು? A. ಮುಂಬೈ ಹೈಕೋರ್ಟ್ B. ಕರ್ನಾಟಕ ಹೈಕೋರ್ಟ್ C. ಮದ್ರಾಸ್ ಹೈಕೋರ್ಟ್ D. ದೆಹಲಿ ಹೈಕೋರ್ಟ್ C✔️✔️ ಅಕ್ಟೋಬರ್ 14ನ್ನು ಕೆಳಕಂಡ ಯಾವ ದಿನವನ್ನಾಗಿ ಆಚರಿಸಲಾಗುತ್ತದೆ .? A. ವಿ ಶ್ವ ಮಾಹಿತಿ ದಿನ B. ವಿಶ್ವ ಪ್ರಾಣಿ ಕಲ್ಯಾಣ ದಿನ C. ವಿಶ್ವ ಮಾನಕ ದಿನ D. ಮೇಲ್ಕಂಡ ಯಾವುದೂ C✔️✔️ ವಿಶ್ವ ಏಡ್ಸ್ ದಿನಾಚರಣೆ ಯಾವ ದಿನ? A. ಡಿಸೆಂಬರ್ 1 B. ಡಿಸೆಂಬರ್ 5 C. ಡಿಸೆಂಬರ್ 11 D. ಡಿಸೆಂಬರ್ 15 A✔️✔️✔️ ಭಾರತದಲ್ಲಿ ಮೊದಲ ಬಾರಿ ಟಿ.ವಿ. ಪರಿಚಯವಾದದ್ದು ಯಾವ ವರ್ಷ? A. 1947 B. 1959 C. 1969 D. 1971 C✔️✔️✔️ 'ಸಶಸ್ತ್ರ ಪಡೆಗಳ ಧ್ವಜ ದಿನ'ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.? A. ಡಿಸೆಂಬರ್ 5 B. ಡಿಸೆಂಬರ್ 7 C. ಡಿಸೆಂಬರ್ 9 D. ಡಿಸೆಂಬರ್ 11 B✔️✔️ 'ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ'ವನ್ನು ಕೆಳಕಂಡ ಯಾವ ದಿನದಂದು ಆಚರಿಸಲಾಗುತ್ತದೆ? A. ಮೇ 1 B. ಮೇ 2 C. ಮೇ 3 D. ಮೇ 4 C✔️✔️🙈🙈 'ಇಂಡಿಯಾ ಡಿಸ್ಕವರ್ಡ್' ಕೃತಿಯನ್ನು ಬರೆದವರು ಯಾರು.? A. ಜಾನ್ ಕೀ B. ಟಿ.ಎಸ್. ಈಲಿಯಟ್ C. ಪಿ.ಡಿ. ಟಂಡನ್ D. ಜವಾಹರಲಾಲ್ ನೆಹರು A✔️✔️✔️ ಹೆಸರಾಂತ ಲೇಖಕ ಮಾರ್ಕ್ ಟ್ವೆನ್ ಅವರ ಮೂಲ ಹೆಸರೇನು? A. ನೆಪೋಲಿಯನ್ B. ಸ್ಯಾಮ್ಯುಯೆಲ್ ಕ್ಲೆಮೆನ್ಸ್ C. ವೆಲ್ಲಿಂಗ್ಟನ್ D. ಸ್ಟಿವನ್ ಸನ B✔️✔️✔️ ಕೀಟಗಳು----ಮೊಲಕ ಉಸಿರಾಡುತ್ತವೆ. a) ಚರ್ಮದ b) ಕಿವಿರು c) ಶ್ವಾಸಕೋಶ d) ಟ್ರೀಕಿಯ D✔️✔️💐 ದಖ್ಖನ್ ನೊಬಲರ ಒಳಸಂಚಿಗೆ ಮರುಳಾಗಿ ಮಹಮದ್ ಗವಾನನನ್ನು ಕೊಲ್ಲಿಸಿದ ಸುಲ್ತಾನು ಯಾರು ? a) ಹುಮಾಯೂನ ಷಾ b) ನಿಜಾಂ ಷಾ c) ೨ ನೇ ಮಹಮದ್ ಷಾ d) ೩ ನೇ ಮಹಮದ್ ಷಾ D✔️✔️ ನಾಲ್ಕು ಸಾಲುಗಳ ಪದ್ಯ ಪದ್ಯಾರ್ಥದಲ್ಲಿ ಆದಿಯಲ್ಲಿ ಆರು ವಿಷ್ಟುಗಣಗಳ ಕೊನೆಯಲ್ಲಿ ಒಂದು ಬ್ರಹ್ಮಗಣವೂ ಬರುವುದು. a) ತ್ರಿಪದಿ b) ಕಂದಪದ್ಯ c) ಸಾಂಗತ್ಯ d) ಯಾವುದು ಅಲ್ಲ C✔️✔️✔️ ಆರಂಭದ ತಮಿಳು ಸಾಹಿತ್ಯವನ್ನು ಸಂಗಂ ಸಾಹಿತ್ಯ ಎಂದೂ ಕರೆಯುತ್ತಾರೆ. ಕಾರಣವೇನು ? a) ಇದನ್ನು ಬೌದ್ಧ ಸಂಘದ ಸದಸ್ಯರು ರಚಿಸಿದ್ದರು b) ಇದು ಸಂಗಮ ರಾಜವಂಶದ ಆಶ್ರಯದಲ್ಲಿ ರಚಿತವಾಗಿತ್ತು. c) ಇದು ಪಂಡಿತರ ಆಧ್ಯಾತ್ಮ ಪಂಥದೊಂದಿಗೆ ಸಂಬಂಧ ಪಡೆದಿರುವಂತದ್ದು d) ಇದನ್ನು ಆಧುನಿಕ ಯುಗದಲ್ಲಿ ಮಧುರೈನ ನಾಲ್ಕನೇ ತಮಿಳು ಚಂಕಂನಿಂದ ಕಂಡುಹಿಡಿಯಲಾಯಿತು. B✔️✔️ ಫ್ಯಾರಫಿನ್ ಕರಗುವ ದ್ರಾವಣ ? a) ಸೀಮೆ ಎಣ್ಣೆ b) ನೀರು c) ಬೆಂಜಿನ್ d) ಈಥೈಲ್ ಆಲ್ಕೋಹಾಲ್ C✔️✔️👌👌💐 ಎಡಗಡೆಯಿಂದ ಬಲಗಡೆಗೆ ಬರೆಯಲಾಗುವ ಲಿಪಿ ? a) ಉರ್ದು b) ಬ್ರಾಹ್ಮಿ c) ಗ್ರೀಕ d) ಸಂಸ್ಕೃತ B✔️✔️✔️ 'ತಾಯೆ ಬಾರ ಮೊಗವ ತೋರೆ ಕನ್ನಡಿಗರ ಮಾತೆಯೇ'ಈ ಕವನ ಯಾರದು ? a) ಮಂಜೇಶ್ವರ ಗೋವಿಂದ ಪೈ b) ತೀ.ನಂ.ಶ್ರೀ c) ಎಂ .ಎನ್. ಕಾಮತ್ d) ಪಂಜೆ ಮಂಗೇಶರಾಯ A✔️✔️✔️ ಕೋಶಕೇಂದ್ರದಲ್ಲಿರುವ ನ್ಯೂಕ್ಲಿಯೋಲಸ್ ಇವುಗಳಿಂದ ಕೊಡಿವೆ a) ಡಿ ಆಕ್ಸಿರೈಬೋಸ್ ನ್ಯೂಕ್ಲಿಯಿಕ ಆಮ್ಲ b) ರೈಬೊನ್ಯೂಕ್ಲಿಯಿಕ್ ಆಮ್ಲ c) ಪ್ರೋಟಿನ್ d) ಸಾವಯುವ ಆಮ್ಲ B✔️✔️✔️ ಈ ಕೆಳಕಂಡ ಯಾವ ದೆಹಲಿ ಸುಲ್ತಾನ ಬ್ರಾಹ್ಮಣರಿಂದಲೂ ;ಜೆಸಿಯಾ; ತಲೆಗಂದಾಯವನ್ನು ವಸೂಲಿ ಮಾಡಿದನು ? a) ಅಲ್ಲಾ ಉದ್ದೀನ ಖಿಲ್ಜಿ b) ಮಹಮ್ಮದ್ ಬಿನ್ ತೊಘಲಕ್ c) ಫಿರೋಜ್ ಷಾ ತೊಘಲಕ d) ಇಬ್ರಾಹಿಂ ಲೂದಿ C✔️✔️✔️ 'ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ;ಕರ್ತೃ a) ಕೆ.ವಿ.ನಾರಯಣ b) ಸೇಡಿಯಾಪು ಕೃಷ್ಣಭಟ್ಟ c) ಡಿ.ಎನ್.ಶಂಕರಭಟ್ಟ d) ಡಿ.ಎ.ಶಂಕರ್ C✔️✔️✔️ ಸೂರ್ಯನಲ್ಲಿ ಶಕ್ತಿ ತಯಾರಾಗುವ ಕ್ರಿಯೆಗೆ---- ಕ್ರಿಯೆ ಎನ್ನುತ್ತಾರೆ ? a) ವಹನ b) ಉಷ್ಣಬೈಜಿಕ ಸಮ್ಮಿಲನ ಕ್ರಿಯೆ c) ಸಂವಹನ d) ವಿಕಿರಣ B✔️✔️✔️ ಬಹುಮನಿಯ ರಾಜಧಾನಿಯನ್ನು ಗುಲ್ಬಗ೯ದಿಂದ ಬೀದರ್ ಗೆ ವಗಾ೯ಯಿಸಿದ ಸುಲ್ತಾನ ಯಾರು ? a) ಮಹಮದ ಷಾ b) ಅಹಮದ ಷಾ c) ನಿಜಾಂ ಷಾ d) ಕುತುಬ್ ಷಾ B✔️✔️✔️ ಶ್ವಾಸೋಚ್ಛಾಸ್ ಕ್ರಿಯೆ ( Respiration ) ಒಂದು a) ಎಕ್ಸೋಥರ್ಮಿಕ್ ಕ್ರಿಯೆ b) ಎಂಡೋಥರ್ಮಿಕ್ ಕ್ರಿಯೆ c) ಫಾಸ್ಛೋಇನಾಲ ಪೈರುವೇಟ d) ಆಸ್ಟಾರ್ಟೆಜ್ C✔️✔️✔️ ಏಷ್ಯಾದ ನೊಬೆಲ್ ಎಂದೇ ಪರಿಗಣಿಸಲ್ಪಟ್ಟಿರುವ ೨೦೧೧ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಭಾರತೀಯ ಹರೀಶ್ ಹಂದೆಯವರು ಸ್ಥಾಪಿಸಿದ ಕಂಪೆನಿ... a) ಸೆಲ್ಕೋ b) ಆಮ್ಕೋ c) ಬೆಮ್ಕೋ d) ಬೆಮೆಲ್ A✔️✔️ ತ್ರಿಪದಿ ಕನ್ನಡ ವೃತ್ತಗಳ ಗಾಯತ್ರಿ ಎಂದವರು ... a) ಬಿ.ಎಂ.ಶ್ರೀ b) ಟಿ.ವಿ.ವೆಂಕಟಾಚಲ ಶಾಸ್ತ್ರಿ c) ದ,ರಾ.ಬೇಂದ್ರೆ d) ಎಲ್.ಬಸವರಾಜು C✔️✔️✅

Sunday, 4 June 2017

ನ್ಯಾಷ್ಯನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇರುವುದು. 1) ಬೆಂಗಳೂರು 2) ಬೆಳಗಾವಿ 3) ಮಂಗಳೂರು*** 4) ಹಾವೇರಿ ಉತ್ತರ : 3